ಸೊನ್ನೆ ಮತ್ತು ದಶಮಾಂಶ ಪದ್ಧತಿಯನ್ನು ಜಗತ್ತಿಗೆ ನೀಡಿದವರು ಭಾರತೀಯರು ಎನ್ನುವುದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಅದರ ಜೊತೆಗೆ ಅನಂತವೂ() ಕೂಡ ನಮ್ಮ ಕೊಡುಗೆಯೇ ಆಗಿದೆ.( ರೋಮನ್ ಸಂಖ್ಯಾಪದ್ಧತಿಯಲ್ಲಿ ಸೊನ್ನೆಯೇ ಇಲ್ಲ!). ಆದರೆ ಈ ಕೊಡುಗೆ ಕುರಿತು ನಮ್ಮ ಬೆನ್ನನ್ನು ನಾವೇ ತಟ್ಟಿಕೊಂಡರೆ ಬೆಲೆಯಿಲ್ಲ. ಹಾಗಿದ್ದಲ್ಲಿ ಕೆಳಗಿನ ಎರಡು ಹೇಳಿಕೆಗಳನ್ನು ಗಮನಿಸಿ:

1.ನಾವು ಭಾರತೀಯರಿಗೆ ಬಹಳ ಆಭಾರಿಯಾಗಿದ್ದೇವೆ. ಅವರು ನಮಗೆ ಎಣಿಸುವುದನ್ನು ಹೇಳಿಕೊಟ್ಟರು. ಅವರು ಆ ಕೊಡುಗೆ ನಮಗೆ ನೀಡದಿದ್ದಲ್ಲಿ ಪ್ರಯೋಜನಕಾರಿಯಾಗುವ ಯಾವುದೇ ವೈಜ್ಞಾನಿಕ ಸಂಶೋಧನೆಯನ್ನು ನಾವು ಮಾಡಲು ಸಾಧ್ಯವಾಗುತ್ತಿರಲಿಲ್ಲ.

ಭೌತ ಶಾಸ್ತ್ರಜ್ಞ ನೊಬೆಲ್ ಪ್ರಶಸ್ತಿ ವಿಜೇತ ಆಲ್ಬರ್ಟ್ ಐನ್ ಸ್ಟೀನ್

ಇದರ ಇಂಗ್ಲೀಷ್ ಮೂಲ:

We owe a lot to the Indians, who taught us how to count, without which no worthwhile scientific discovery could have been made”

Nobel laurite Albert Einstein. 1879-1955

2.ಗ್ರೀಕರು ಶೂನ್ಯವನ್ನು ನಂಬಲಿಲ್ಲ. ಅನಂತ ಶ್ರೇಣಿಯ ಸಂಖ್ಯೆಗಳು ಚಿಕ್ಕದಾಗುತ್ತಾ ಹೋದರೂ ಅವುಗಳನ್ನು ಊಹಿಸಲೂ ಅವರಿಂದ ಸಾಧ್ಯವಾಗಲಿಲ್ಲ. ಹಾಗೆಯೆ, ‘ಅನಂತ ಸಂಖ್ಯೆ() ಗಗನಕುಸುಮವಾಯಿತು. ಅವರು ನಿರ್ವಾತದ ಬಗ್ಗೆ ಆಲೋಚಿಸಿದರು ಆದರೆ ಶೂನ್ಯವನ್ನು ಧಿಕ್ಕರಿಸಿದರು ಹಾಗೆಯೇ ಅನಂತ ಸಂಖ್ಯೆಯನ್ನೂ ಸಹ. ಗ್ರೀಕ್ ಗಣಿತಜ್ಞರ ಈ ದೊಡ್ಡ ವ್ಯೆಫಲ್ಯದಿಂದಾಗಿ ಅವರು ಕ್ಯಾಲ್ಕುಲಸ್ ನ್ನು ಕಂಡುಹಿಡಿಯಲಾರದೇ ಹೋದರು.

ಜೀರೋ ಎನ್ನುವ ಪುಸ್ತಕದಲ್ಲಿ ಅಮೇರಿಕದ ಪ್ರಾಧ್ಯಾಪಕ ಚಾರ್ಲ್ಸ್ ಸೈಫ಼್

ಇದರ ಇಂಗ್ಲೀಷ್ ಮೂಲ:

Greeks could not do this neat little mathematical trick. They did not believe in zero. The terms of the infinite series seemed to get smaller and smaller without particular end in sight. As a result they could not handle infinity. They pondered the concept of void but rejected zero as a number. They refused infinity. This is the biggest failure in the Greek mathematics and is the only thing that kept them from discovering calculus”

Charles Seife . (American professor ) in “Zero : The biography of a dangerous idea”


ಇನ್ನು ಇವರ ಹೇಳಿಕೆಗಳಿಗೆ ನಮ್ಮಲ್ಲಿರುವ ಆಧಾರವೇನು ಎನ್ನುವುದನ್ನು ಗಮನಿಸುವಾ

ದಶಮಾಂಶ ಪದ್ಧತಿಯ ಕುರಿತ ಕೃಷ್ಣ ಯಜುರ್ವೇದ (4.4.11.12) ದಲ್ಲಿನ ಉಲ್ಲೇಖ ನೋಡಿ.

ಇಮಾ ಮೇ ಅಗ್ನ ಇಷ್ಟಕ ಧೇನವ: ಸಂತು ಏಕ ದಶ ಶತಂ ಸಹಸ್ರಂ ಅಯುತಂ ನಿಯುತಂ ಪ್ರಯುತಂ ಅರ್ಬುದಂ ನ್ಯರ್ಬುದಂ ಸಮುದ್ರ: ಮಧ್ಯಂ ಅಂತ: ಪರಾರ್ಧ: ಇಮಾ ಮೇ ಅಗ್ನ ಇಷ್ಟಕ ಧೇನವ: . . .ಇಲ್ಲಿ ಹೆಸರಿಸಲ್ಪಟ್ಟ ಸಂಖ್ಯೆಗಳನ್ನು ವಿಸ್ತರಿಸಿದಾಗ(ಕ್ರಮವಾಗಿ 1, 10,100,1000. . .1012 ).ಇಲ್ಲಿ ಹೆಸರಿಸಲ್ಪಟ್ಟ ಸಂಖ್ಯೆಗಳು(ದಶ, ಶತಂ, ಸಹಸ್ರಂ, ಅಯುತಂ . . . .) ಹಿಂದಿನ ಸಂಖ್ಯೆಯ ಹತ್ತರಷ್ಟಿರುವುದನ್ನು ಗಮನಿಸಿ.

ಇದರಿಂದ ವೇದಗಳ ಕಾಲದಲ್ಲೇ ಭಾರತೀಯರು ಸೊನ್ನೆ ಮತ್ತು ದಶಮಾಂಶ ಪದ್ಧತಿಯನ್ನು ಬಳಸುತ್ತಿದ್ದರು ಎಂದು ತಿಳಿದುಬರುತ್ತದೆ.

ಮೇಲೆ ತಿಳಿಸಿರುವ ಆಧಾರವಲ್ಲದೇ, ಬ್ರಹ್ಮಾಂಡ ಪುರಾಣ ಮತ್ತು ರಾಮಾಯಣದಲ್ಲೂ ದಶಮಾಂಶ ಪದ್ಧತಿಯನ್ನು ಬಳಸಿರುವುದು ಕಂಡುಬರುತ್ತದೆ.

ಭಾರತದ ಅಂಕೆಗಳು, ದಶಮಾಂಶ ಪದ್ಧತಿಯು ಅರಬರ ಮೂಲಕ ಯುರೋಪ್ ಗೆ ತಲುಪಿದ್ದು, ಈಗ ಈ ಅಂಕೆಗಳು ಹಿಂದೂ ಆರೇಬಿಕ್ ಎನ್ನುವ ಸಂಖ್ಯೆಗಳೆಂದು ಕರೆಯಿಸಿಕೊಳ್ಳಲ್ಪಡುತ್ತಿವೆ.

ಇನ್ನೂ ಹೆಚ್ಚಿನ ಮಾಹಿತಿಗಾಗಿ ಗಣಿತ8,9,10 ಕಂಪ್ಯೂಟರ್ ಡಿವಿಡಿಯಲ್ಲಿನ ಸಾಕ್ಷ್ಯಚಿತ್ರ ನೋಡಿ(www.FREEganita.com)