ನಿಮ್ಮ ಪ್ರಶ್ನೆಗಳಿಗೆ ನಮ್ಮ ಉತ್ತರಗಳು:

1. ಇಲ್ಲಿ ನೋಂದಣಿಯ ಅಗತ್ಯವೇನು?

ಈ ವೆಬ್ ಪೋರ್ಟಲ್ ನಲ್ಲಿರುವ ಪ್ರಶ್ನೆ ಮತ್ತು ಲೇಖನಗಳನ್ನು ನೋಡಲು ಯಾವುದೇ ತೆರನಾದ ನಿರ್ಬಂಧ ಇರುವುದಿಲ್ಲ. ಆದರೆ, ಇಲ್ಲಿ ಪ್ರಶ್ನೆ ಅಥವಾ ಲೇಖನಗಳನ್ನು ನೀಡಿದವರನ್ನು ಸಂಪರ್ಕಿಸಲು ನೋಂದಣಿಯ ಅಗತ್ಯವಿರುತ್ತದೆ. ನೋಂದಣಿಯ ಸಮಯದಲ್ಲಿ ನಿಮ್ಮಿಂದ ಬಯಸುವ ವಿವರಗಳು ಕೆಲವೇ ಇರುತ್ತವೆ.

2. ಇಲ್ಲಿ ಯಾವ ತೆರನಾದ ಲೇಖನಗಳನ್ನು ಸಲಿಸಬಹುದು?

ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಿರುವುದರಿಂದ ಪಠ್ಯ ವಿಷಯಗಳನ್ನಲ್ಲದೆ ಪಠ್ಯೇತರ ವಿಷಯಗಳ ಕುರಿತೂ ಲೇಖನಗಳನ್ನು ಸಲ್ಲಿಸಬಹುದು( ಉದಾ: ಪತ್ರಲೇಖನ, ಪ್ರವಾಸ ಕಥನ, ಶಾಲೆಯಲ್ಲಿನ ವಿವಿಧ ಚಟುವಟಿಕೆಗಳು..) ಹಾಗೆಯೇ ಶಿಕ್ಷಕರೂ ಕೂಡ, ತಮ್ಮ ಕಲಿಸುವ ವಿಧಾನದಲ್ಲಿ ಏನಾದರೂ ನೂತನ ಬದಲಾವಣೆಯನ್ನು ಕಂಡುಕೊಂಡಿದ್ದಲ್ಲಿ ಆ ವಿವರಗಳನ್ನೂ ಇಲ್ಲಿ ಇತರ ಶಿಕ್ಷಕರೊಂದಿಗೆ ಹಂಚಿಕೊಳ್ಳಬಹುದು. ಒಟ್ಟಿನಲ್ಲಿ ಇಲ್ಲಿ ಸಲ್ಲಿಸಬಹುದಾದ ಮಾಹಿತಿಗಳಿಗೆ ಯಾವುದೇ ಇತಿಮಿತಿ ಇರುವುದಿಲ್ಲ.

3. ಪ್ರವೇಶ ಹೊಂದಲು ಬೇಕಾಗುವ ಪಾಸ್ವರ್ಡ್ ನಾನು ನೀಡಿದ ಇಮೈಲ್ ಗೆ ನಿಮ್ಮಿಂದ ಬಂದಿಲ್ಲ.

ನೋಂದಣಿ ಮಾಡುವಾಗ, ನೀವು ನೀಡುವ ಇಮೈಲ್ ವಿಳಾಸಕ್ಕೆ ಆರಂಭಿಕ ಪಾಸ್ವರ್ಡ್ ನ್ನು ಕಳಿಸಲಾಗುತ್ತದೆ. ಈ ಇಮೈಲ್ ನಿಮ್ಮ ಇಮೈಲ್ ನ ಸ್ಪ್ಯಾಮ್ ಫೋಲ್ಡರ್ ನಲ್ಲಿ ಇದ್ದರೂ ಇರಬಹುದು. ಆ ಫೋಲ್ಡರ್ ನ್ನು ಸರಿಯಾಗಿ ಪರೀಕ್ಷಿಸಿ.

4. ಹೆಸರು ಮತ್ತು ಬಳಸುವ ಹೆಸರು(ಯೂಸರ್ ಐಡಿ) ಎಂದು ಎರಡು ವಿವರಗಳನ್ನು ಏಕೆ ನೀಡಬೇಕು?

ಲೇಖಕರು ನೀಡಿದ ಪೂರ್ತಿ ಹೆಸರು ಎಲ್ಲಾ ಲೇಖನದ ಕೆಳಗೆ ಕಾಣಿಸಿಕೊಳ್ಳುತ್ತದೆ. ಪಾಸ್ವರ್ಡ್ ಮರೆತು ಹೋದಾಗ, ತಿರುಗ ಪಾಸ್ವರ್ಡ್ ಕಳಿಸಬೇಕಾದಾಗ ಬಳಸುವ ಹೆಸರು ನೀಡಬೇಕಾಗುತ್ತದೆ.

5. ಪಾಸ್ವರ್ಡ್ ಮರೆತು ಹೋದರೆ ಏನು ಮಾಡಬೇಕು?

ನೀವು ಮೊದಲು ನೀಡಿದ ಬಳಸುವ ಹೆಸರು ಮತ್ತು ಇಮೈಲ್ ವಿಳಾಸಗಳನ್ನು 'ಪಾಸ್ವರ್ಡ್ ಬದಲಾವಣೆ' ಸ್ಕ್ರೀನ್ ನಲ್ಲಿ ನೀಡಿ. ನಿಮ್ಮ ಇಮೈಲ್ ಗೆ ತಿರುಗ ಹೊಸ ಪಾಸ್ವರ್ಡ್ ನ್ನು ಕಳಿಸಲಾಗುತ್ತದೆ. ಅದನ್ನು ಉಪಯೋಗಿಸಿ, ಪ್ರವೇಶ ಪಡೆದು ಪಾಸ್ವರ್ಡ್ ನ್ನು ಬದಲಿಸುತ್ತಾ ಇರಿ.

6. ಬಳಸುವ ಹೆಸರು ಮರತು ಹೋಗಿರುವುದರಿಂದ 'ಪಾಸ್ವರ್ಡ್ ಮರೆತಿದೆ' ಸ್ಕ್ರೀನ್ ಬಳಸಲು ಆಗುತ್ತಿಲ್ಲ.

ನಿಮ್ಮ ವಿವರಗಳನ್ನು ನೀಡಿ contact@eshale.org ಗೆ ಇ ಮೈಲ್ ಕಳಿಸಿ. ನಿಮ್ಮ ಇಮೈಲ್ ಗೆ ಬಳಸುವ ಹೆಸರನ್ನು ಕಳಿಸಲಾಗುತ್ತದೆ. ಆನಂತರ ಪ್ರಶ್ನೆ 4ಕ್ಕೆ ನೀಡಿದ ಉತ್ತರದಂತೆ ಮುಂದುವರಿಯಿರಿ.

7. ತರಗತಿ. ಕಲಿಕಾ ಮಾಧ್ಯಮ, ಶಾಲೆಯ ವರ್ಗೀಕರಣದ ವಿವರಗಳನ್ನು ಕೇವಲ ವಿದ್ಯಾರ್ಥಿಗಳು ಮಾತ್ರ ನೀಡಬೇಕೇ?

ಇಲ್ಲ. ಅಧ್ಯಾಪಕರು ತಾವು ಕಲಿಸುತ್ತಿರುವ ಹಾಗೂ ಪಾಲಕರು ತಮ್ಮ ಮಕ್ಕಳು ಕಲಿಯುತ್ತಿರುವ ತರಗತಿಯ ಕುರಿತಾಗಿ ವಿವರ ನೀಡಬಹುದು. ಇದು ನಮಗೆ ಅಂಕಿಅಂಶಗಳನ್ನು ಕ್ರೋಢೀಕರಿಸಲು ಸಹಾಯವಾಗುತ್ತದೆ. ವಿದ್ಯಾರ್ಥಿ/ಪಾಲಕ/ಶಿಕ್ಷಕರುಗಳನ್ನು ಹೊರತುಪಡಿಸಿ ’ಇತರ’ ರು ಈ ವಿವರಗಳನ್ನು ನೀಡಬೇಕಾಗಿಲ್ಲ.

8. ಲೇಖನ/ಪ್ರಶ್ನೆ ಸ್ಕ್ರೀನ್ ನಲ್ಲಿ ವರ್ಷ ವನ್ನು ಏಕೆ ನೀಡಬೇಕು?

ಪಠ್ಯಕ್ರಮ(ಸಿಲಬಸ್) ಬದಲಾಗುವುದರಿಂದ ಹಿಂದಿನ ವರ್ಷಗಳ ಪಠ್ಯಕ್ಕೆ ಸಂಬಂಧಿಸಿದ ಪಾಠಗಳ/ಪ್ರಶ್ನೆಗಳ ಬಗ್ಗೆ ಗಮನಹರಿಸದೇ ಇರಲು ವಿದ್ಯಾರ್ಥಿಗಳಿಗೆ ಈ ಮಾಹಿತಿ ಸಹಾಯವಾಗುತ್ತದೆ.

9. ಲೇಖನ/ಪ್ರಶ್ನೆ ಸ್ಕ್ರೀನ್ ನಲ್ಲಿ ನೀಡುವ ತರಗತಿ/ಪಾಠ ಗಳ ಮಹತ್ವ ಏನು?

ಒದಗಿಸುವ ಲೇಖನ ಯಾವ ತರಗತಿಯ ಯಾವ ಪಾಠಗಳಿಗೆ ಸಂಬಂಧಿಸಿದ್ದು ಎಂದು ವಿದ್ಯಾರ್ಥಿಗಳಿಗೆ ತಿಳಿದು, ಅವರಿಗೆ ಹುಡುಕಲು,ಕಲಿಯಲು ಸುಲಭವಾಗುತ್ತದೆ.

10. ಲೇಖನ ಯಾವ ತರಗತಿಗೆ ಮತ್ತು ಪಾಠಕ್ಕೆ ಸಂಬಂಧಿಸಿದೆ ಎಂದು ನೀಡುವ ಅಗತ್ಯವೇನು?

ಈ ವೆಬ್ ಪೋರ್ಟಲ್ ಕಲಿಯುವ ಮಕ್ಕಳಿಗಾಗಿ ಇದ್ದು. ಲೇಖನ ಯಾವ ತರಗತಿಯ ಯಾವ ಪಾಠಕ್ಕೆ ಸಂಬಂಧಿಸಿದೆ ಎಂದು ಅವರಿಗೆ ಗೊತ್ತಾಗುವಂತಿದ್ದರೆ, ಅವರು ತಮಗೆ ಬೇಕಾದ ಲೇಖನಗಳನ್ನು ಮಾತ್ರ ಹುಡುಕಿ ಕಲಿಯಲು ಸಹಾಯವಾಗುತ್ತದೆ.

11. ಕೆಲವು ವಿಷಯಗಳು ಯಾವುದೇ ಒಂದು ತರಗತಿಗೆ ಮೀಸಲಾಗಿ ಇರುವುದಿಲ್ಲ. ಆಗ ತರಗತಿ ಯಾವುದೆಂದು ಹೇಗೆ ನಮೂದಿಸಬೇಕು?

ಇಂತಹ ಸಂದರ್ಭಗಳಲ್ಲಿ ಮಕ್ಕಳ ಕಲಿಕೆಯ ಮಟ್ಟಕ್ಕೆ ಅನುಗುಣವಾಗಿ (1-5, 6-7, 8+) ಎಂದು ವರ್ಗೀಕರಿಸಲಾಗಿರುವ ತರಗತಿಗಳೆಂದು ನಮೂದಿಸಬಹುದು. ಇಂತಹ ಸಂದರ್ಭಗಳಲ್ಲಿ ಪಾಠದ ಸಂಖ್ಯೆ ನೀಡುವ ಅಗತ್ಯವಿರುವುದಿಲ್ಲ. ವಿಷಯ ’ಪಠ್ಯೇತರ/ಸಾಮಾನ್ಯ ಜ್ಞಾನ/ಶಿಕ್ಷಕರಿಗಾಗಿ’ ಸಂಬಂಧಿಸಿದ್ದರೆ ಮಕ್ಕಳ ಕಲಿಕೆಯಮಟ್ಟ(ತರಗತಿ)ವನ್ನು ನೀಡಬೇಕು,ಆದರೆ ಪಾಠದ ಸಂಖ್ಯೆ ನೀಡಬೇಕಾಗಿಲ್ಲ.

12. ಶಿಕ್ಷಕರ ಅನುಕೂಲಕ್ಕೆ ಸಂಬಂಧಿಸಿದ ಯೋಜನೆ/ಚಟುವಟಿಕೆ/ಪ್ರಯೋಗಗಳ ಕುರಿತು ಯಾವ ರೀತಿ ವಿವರಗಳನ್ನು ನೀಡಬೇಕು?

ಲೇಖನ ನೀಡುವ ಸ್ಕ್ರೀನ್ ನಲ್ಲಿ ’ಶಿಕ್ಷಕರಿಗಾಗಿ’ ಎನ್ನುವ ವಿಷಯವನ್ನು ಆಯ್ಕೆ ಮಾಡಿಕೊಂಡು ವಿವರಗಳನ್ನು ಸಲ್ಲಿಸಿ( ತರಗತಿ ನೀಡಬೇಕು ಆದರೆ ಪಾಠದ ಸಂಖ್ಯೆ ನೀಡುವ ಅಗತ್ಯವಿಲ್ಲ).

13. ನಾನು ಹಾಕಿದ ಪ್ರಶ್ನೆ/ಲೇಖನದಲ್ಲಿ ತಪ್ಪಿದೆ. ಅದನ್ನು ನಾನೇ ಸರಿಪಡಿಸುವುದು ಹೇಗೆ?

ಲೇಖನ/ಪ್ರಶ್ನೆಗಳನ್ನು ನೇರವಾಗಿ ಬದಲಿಸಲು ಸಾಧ್ಯವಿಲ್ಲ. ಅವುಗಳನ್ನು ಮೊದಲು ಒಂದೆಡೆ ಉಳಿಸಿಕೊಂಡು, ಅವುಗಳನ್ನು ಈ ವೆಬ್ ಪೋರ್ಟಲ್ ನಿಂದ ತೆಗೆದು, ಬದಲಾಯಿಸಿ, ತಿರುಗ ಅವುಗಳನ್ನು ತಿರುಗಿ ಸಲ್ಲಿಸಬೇಕು. ಈ ಕ್ರಿಯೆಗೆ ಅನುಕೂಲವಾಗಲೆಂದು ಪ್ರತೀ ಲೇಖನ/ಪ್ರಶ್ನೆ ಗೂ ಒಂದು ಎಕೈಕ ಸಂಖ್ಯೆಯನ್ನು ನೀಡಲಾಗುತ್ತದೆ. ನೀವು ಸಲ್ಲಿಸಿದ ಎಲ್ಲಾ ಲೇಖನ/ಪ್ರಶ್ನೆಗಳ ಪಟ್ಟಿಯನ್ನು ’ಲೇಖಕರ ಪುಟ’ ದ ಮೂಲಕ ಪಡೆಯಬಹುದು. ಅಲ್ಲಿ ಅವುಗಳನ್ನು ಉಳಿಸಿಕೊಳ್ಳಲು(ಡೌನ್ ಲೋಡ್), ತೆಗೆದುಹಾಕಲು ಕೊಂಡಿಯನ್ನು ನೀಡಲಾಗಿದೆ.

14. ಇಲ್ಲಿ ಲೇಖನ /ಪ್ರಶ್ನೆ ಹಾಕಲು ’ಆನ್ ಲೈನ್’ ಸಂಪರ್ಕ ಇಟ್ಟುಕೊಂಡಿರಬೇಕೇ?

ಬೇಕಿಲ್ಲ. ನೀವು ಮೊದಲೇ ಲೇಖನಗಳನ್ನು ಪರಾಮರ್ಶಿಸಿ ಸಿದ್ಧಪಡಿಸಿ ಇಟ್ಟುಕೊಂಡಿದ್ದರೆ, ಆನ್ ಲೈನ್ ಸಂಪರ್ಕ ಇದ್ದಾಗ ಫೈಲ್ ನ್ನು ಅಪ್ಲೋಡ್ ಮಾಡಿದರೆ ಆಯಿತು. ಲೇಖನವನ್ನು ಮೊದಲೇ ಸಿದ್ಧಪಡಿಸಿ, ಪರಾಮರ್ಶಿಸಿ ಫೈಲ್ ರೂಪದಲ್ಲಿ ಉಳಿಸಿಕೊಂಡಿದ್ದರೆ ತಪ್ಪುಗಳು ನುಸುಳುವ ಸಾಧ್ಯತೆ ತೀರಾ ಕಡಿಮೆ. ಆನ್ ಲೈನ್ ಸಂಪರ್ಕ ಇದ್ದಾಗಲೂ ಲೇಖನವನ್ನು ಸಲ್ಲಿಸುವ ಸೌಲಭ್ಯವನ್ನು ಕಾಲಕ್ರಮೇಣ ನೀಡಲಾಗುವುದು. ಆಗ ಕನ್ನಡದಲ್ಲಿ ಟೈಪಿಸಿದರೆ ಯುನಿಕೋಡ್ ನಲ್ಲಿ ವಿವರಗಳು ಉಳಿಸಲ್ಪಡುತ್ತವೆ.

15. ಮಾಹಿತಿ ಇರುವ ಫೈಲ್ ಗಳು ಯಾವ ರೂಪದಲ್ಲಿ ಇರಬೇಕು?

ಕನ್ನಡದಲ್ಲಿನ ವಿಷಯಗಳಾದರೆ ಫೈಲ್ ಗಳು pdf, html/htm ರೂಪದಲ್ಲಿ ಇರಬೇಕು. ವಿಷಯಗಳು ಇಂಗ್ಲಿಷ್ ನಲ್ಲಿ ಇದ್ದರೆ txt ರೂಪದಲ್ಲೂ ಇರಬಹುದು. ಫೈಲ್ ಗಳು doc,xls..,, ಮತ್ತಿತರ ರೂಪಗಳಲ್ಲಿ ಇರಬಾರದು.

16. ನಾನು ಸಿದ್ಧಪಡಿಸಿರುವ ಲೇಖನ/ಪ್ರಶ್ನೆ/ಉತ್ತರ ವಿರುವ ಫೈಲ್ ನ್ನು ಹೇಗೆ pdf, html/htm ರೂಪಕ್ಕೆ ಮಾರ್ಪಡಿಸಬಹುದು?

ವಿ.ಸೂ:

17. ಕನ್ನಡದಲ್ಲಿನ ಫೈಲ್ ಗಳನ್ನು ತಯಾರಿಸಲು ಯಾವ ಫಾಂಟ್( ಶೈಲಿ) ಯನ್ನು ಬಳಸಬೇಕು/ಫಾಂಟ್ ಗಾತ್ರ ಎಷ್ಟಿರಬೇಕು?

ಯುನಿಕೋಡ್(ತುಂಗ ಫಾಂಟ್) ನಲ್ಲಿ ಲೇಖನಗಳನ್ನು ಟೈಪ್ ಮಾಡಿದರೆ ಯಾವುದೇ ರೀತಿಯ ಸಮಸ್ಯೆಯೂ ಉದ್ಭವಿಸುವುದಿಲ್ಲ. ಆದುದರಿಂದ ಲೇಖನಗಳನ್ನು ಯುನಿಕೋಡ್ ನಲ್ಲಿ ಟೈಪ್ ಮಾಡಿ. ಹಾಗೂ ಫಾಂಟ್ ಗಾತ್ರ 12 ಇರುವಂತೆ ನೋಡಿಕೊಳ್ಳಿ.

18. ನನ್ನ ಕಂಪ್ಯೂಟರ್ ನಲ್ಲಿ ಕನ್ನಡದ ಲೇಖನಗಳು ಸರಿಯಾಗಿ ಮೂಡಿಬರುತ್ತಿಲ್ಲ ಏಕೆ?

ಇಂತಹ ಲೇಖನಗಳನ್ನು ನೋಡಲು ಸೂಕ್ತ ಫಾಂಟ್ ನ ಅಗತ್ಯವಿರುತ್ತದೆ. ಅಂತಹ ಲೇಖನದ ಸಂಖ್ಯೆಯನ್ನು ನೀಡಿ ನಮಗೆ ’ಸಂಪರ್ಕಿಸಿ’ ಪುಟದ ಮೂಲಕ ವಿವರ ಕಳಿಸಿ. ಲೇಖನವನ್ನು ಯುನಿಕೋಡ್ ಗೆ ಪರಿವರ್ತಿಸಲಾಗುತ್ತದೆ.

19. ಲೇಖನಗಳು ಅಶ್ಲೀಲ/ಕಾನೂನು ಬಾಹಿರ/ತಪ್ಪಾಗಿ ಹಾಕಿದ್ದಾರೆ. ಏನು ಮಾಡಬೇಕು?

ಲೇಖನದ ಸಂಖ್ಯೆ ನೀಡಿ ನಮಗೆ ’ಸಂಪರ್ಕಿಸಿ’ ಪುಟದ ಮೂಲಕ ವಿವರ ಕಳಿಸಿ. ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.

20. ವಿದ್ಯಾರ್ಥಿಗಳು ಪ್ರಶ್ನೆಗಳಿಗೆ ತಾವೇ ತಾವಾಗಿ ಹೇಗೆ ಮೌಲ್ಯಮಾಪನ ಮಾಡಿಕೊಳ್ಳಬಹುದು?

ಪ್ರಶ್ನೋತ್ತರ ಹುಡುಕು’ ಸ್ಕ್ರೀನ್ ನಲ್ಲಿ ಮೊದಲು ಕೇವಲ ಪ್ರಶ್ನೆ ಮಾತ್ರ ಕಾಣಿಸಿಕೊಳ್ಳುತ್ತದೆ. ’ಉತ್ತರಕ್ಕೆ ಇಲ್ಲಿ ಕ್ಲಿಕ್ಕಿಸಿ’ ಎನ್ನುವುದರ ಮೇಲೆ ಕ್ಲಿಕ್ಕಿಸಿದಾಗ ಮಾತ್ರ ಉತ್ತರ ಕಾಣಿಸುತ್ತದೆ. ಈ ವ್ಯವಸ್ಥೆ ಸ್ವಯಂ ಮೌಲ್ಯಮಾಪನಕ್ಕೆ ಸಹಕಾರಿಯಾಗುತ್ತದೆ.

21.ಲೇಖನ/ಪ್ರಶ್ನೋತ್ತರಗಳನ್ನು ಹುಡುಕುವ ಕ್ರಮ ಹೇಗೆ?

ಯಾವ ’ವಿಷಯ’ ದ ಕುರಿತು ಹುಡುಕುತ್ತೀರಿ ಎನ್ನುವುದನ್ನು ನೀಡಲೇ ಬೇಕು. ತರಗತಿ,ಪಾಠ ಗಳನ್ನು ನೀಡಿದಾಗ ಫಲಿತಾಂಶದ ಪಟ್ಟಿ ಸಣ್ಣದಾಗುತ್ತದೆ. ಶೀರ್ಷಿಕೆ/ಮುಖ್ಯಪದಗಳನ್ನು ನೀಡಿದಾಗ ಫಲಿತಾಂಶದ ಪಟ್ಟಿ ಇನ್ನೂ ಸಣ್ಣದಾಗಿ ನಿಮಗೆ ಬೇಕಾದ ವಿವರಗಳು ಕೂಡಲೆ ಸಿಗುತ್ತವೆ.

22. ಇಲ್ಲಿನ ಲೇಖನ/ಪ್ರಶ್ನೋತ್ತರಗಳ ಫೈಲ್ ಗಳನ್ನು ನಾವು ಉಳಿಸಿಕೊಳ್ಳಬಹುದೇ?

ಸಾಧ್ಯವಿದೆ. ನಿಮ್ಮ ಅಯ್ಕೆಗನುಗುಣವಾಗಿ ಪ್ರದರ್ಶನಗೊಳ್ಳುವ ಹುಡುಕಿದ ಪಟ್ಟಿಯ ಬಲತುದಿಯಲ್ಲಿ ಕ್ಲಿಕ್ಕಿಸಿದಾಗ ಸಂಬಂದಿಸಿದ ಫೈಲ್ ಗಳನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು.

23. ಇಲ್ಲಿ ನೀಡುವ ವಿವರಗಳು ಕನ್ನಡದಲ್ಲಿ ಮಾತ್ರ ಇರಬೇಕೇ?

ಹಾಗೇನಿಲ್ಲ. ಇಂಗ್ಲೀಷ್ ನಲ್ಲೂ ವಿವರಗಳನ್ನು ನೀಡಬಹುದು. ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಪರಸ್ಪರ ಬದಲಾಯಿಸಿ ಟೈಪಿಸಲು ಕೀ ಬೋರ್ಡ್ ನ ಮೊದಲನೇ ಸಾಲಿನಲ್ಲಿರುವ ಕೀ F12 ಒತ್ತಿ.

24. ಕನ್ನಡದಲ್ಲಿ ಟೈಪಿಸುವ ಕ್ರಮ ಹೇಗೆ?

ಯುನಿಕೋಡ್ ನಲ್ಲಿ ಟೈಪಿಸಲು ಬರಹದಲ್ಲಿರುವಂತೆ ಟೈಪಿಸಬೇಕು. ಉದಾಹರಣೆಗೆ/ಸಹಾಯಕ್ಕೆ www.kannadaslate.com ಕ್ಲಿಕ್ಕಿಸಿ.

25. ಫೋಟೋ ಯಾವ ರೂಪದಲ್ಲಿ ಮತ್ತು ಯಾವ ಗಾತ್ರದಲ್ಲಿ ಇರಬೇಕು?

ಫೋಟೋ .jpg ರೂಪದಲ್ಲಿ ಇದ್ದು, ಆ ಫೈಲ್ ನ ಗಾತ್ರ 200kb ಗಿಂತ ಹೆಚ್ಚಿರಬಾರದು. ಫೋಟೋದ ಅಗಲ ಮತ್ತು ಎತ್ತರ 4:5 ಅನುಪಾತದಲ್ಲಿ ಇರಬೇಕು. ಫೋಟೋದ ಗಾತ್ರ 80x100 ಪಿಕ್ಸೆಲ್ ನಲ್ಲಿ ಇದ್ದರೆ ಒಳಿತು.ಫೈಲ್ ನ ಗಾತ್ರವನ್ನು ಕಡಿಮೆ ಮಾಡಲು ಮತ್ತು ಫೋಟೋದ ಗಾತ್ರವನ್ನು ಬದಲಿಸಲು: (ಫೋಟೋ ತೆಗೆಯಲು ಮೊಬೈಲ್ ಫೋನನ್ನೂ ಉಪಯೋಗಿಸಬಹುದು)

  1. www.gimp.org ನಿಂದ ತಂತ್ರಾಂಶವನ್ನು ಡೌನ್ ಲೋಡ್ ಮಾಡಿ ಅದನ್ನು ಬಳಸಿ.

    ಅಥವಾ

  2. ಆನ್ ಲೈನ್ ಇರುವಾಗ www.freeonlinephotoeditor.com ನಲ್ಲಿ ಫೋಟೋ ಅಪ್ಲೋಡ್ ಮಾಡಿದ ನಂತರ, Resize ಆಯ್ಕೆ ಬಳಸಿ.

26. ಇನ್ನೂ ಏನೆಲ್ಲ ಸೌಲಭ್ಯಗಳಿವೆ?