www.FREEganita.com : High school Mathematics web portal
 
 

Good foundation in mathematics is necessary not only for higher studies, but also to improve an individual's reasoning capacity and analytical ability. Generally mathematics is perceived as a tough nut to crack. However a sound and good foundation in early stages of learning and an interesting introduction to basic concepts of mathematics helps one to over come mathematics phobia. Since it was felt that computer assisted learning is at its best when introduced to high school students, a free mathematics web portal was developed to help students studying in 8th to 10th standards. The features are:

1. English version of the site covers syllabuses of CBSE, ICSE and state boards of Karnataka, Kerala, Maharashtra, Andhra Pradesha and Tamilnadu.
2. All lessons can be freely downloaded for use at leisure
3. Focus on Why and Where rather than just How
4. Concept of verification
5. Suitable introduction to most of the topics
6. Stress on lessons of daily use like banking, profit and loss, partnership, etc.
7. Examples drawn from ‘Lilavathi’, a work by the Indian Mathematician Bhaskaracharya

For details Visit www.FREEganita.com

 

 
     
 
www.FREEganita.com : ಗಣಿತ ಕಲಿಕೆಯ ಉಚಿತ ವೆಬ್ ಪೋರ್ಟಲ್
 
 

ಇಂದು ಶಿಕ್ಷಣವು-ಗುಣಮಟ್ಟದ ಶಿಕ್ಷಣವು- ನಗರದಲ್ಲಿಯ, ತಕ್ಕಮಟ್ಟಿಗೆ ಇನ್ನಿತರ ಕಡೆಗಳಲ್ಲಿಯ ಅಂಗ್ಲಮಾಧ್ಯಮ ಶಾಲೆಗಳಿಂದಲೇ ದೊರಕುತ್ತಿದೆ ಎಂಬ ಭ್ರಮೆ ಬಹುತೇಕ ಎಲ್ಲರಲ್ಲಿದೆ. ಮೇಲ್ನೋಟಕ್ಕೆ ಹಾಗೆ ಕಾಣಿಸುವುದೂ ಸತ್ಯ. ಮಾನವೀಯತೆಯನ್ನು ಬೆಳೆಸದ, ಉತ್ತಮಸ್ಥಾನಮಾನದ ಏಕೈಕಗುರಿಯಾಗಿರುವ ಈ ಜ್ಞಾನದ ತುಂಬಿಸುವಿಕೆಯ ಶಿಕ್ಷಣಕ್ರಮವು ಸಾಮಾನ್ಯ ಕನ್ನಡಮಾಧ್ಯಮದ ವಿದ್ಯಾರ್ಥಿಗಳನ್ನು ಕೆಲವೊಮ್ಮೆ ಅವಹೇಳನದ ಘಟಕವನ್ನಾಗಿಸಿ ಅಧೀರರನ್ನಾಗಿಸುವುದೂ ಉಂಟು.

ಇಂತಹ ಸಂಕೀರ್ಣಕಾಲದಲ್ಲಿ ಅಸಹಾಯಕ ಅಥವಾ ಉದ್ದೇಶಪೂರ್ವಕವಾಗಿ ಕನ್ನಡಮಾಧ್ಯಮದ ಮಕ್ಕಳಿಗೆ, ಅವರು ವಿಶೇಷವಾಗಿ ಹೆದರುವ ಅಪರಿಚಿತ ಗುಮ್ಮನಂತಿರುವ ಇಂಗ್ಲೀಷ್ ಮತ್ತು ಜೀವನಾವಶ್ಯಕ ಗಣಿತದ ಕುರಿತಾಗಿ ಧೈರ್ಯತುಂಬುವ ಕಾರ್ಯವಾಗಬೇಕು. ಈ ಎರಡು ವಿಷಯಗಳ ಕಲಿಕೆಯಲ್ಲಿ ಅವರು ನಾನಾಕಾರಣಗಳಿಂದಾಗಿ ಹಿಂದೆ ಬೀಳುತ್ತಾರೆ. ಆಗ ಸೂಕ್ತಮಾರ್ಗದರ್ಶನದೊಂದಿಗೆ ಹೆಚ್ಚಿನ ಅರಿವು ನೀಡುವುದು ಅಗತ್ಯ. ಆದಕ್ಕಾಗಿ ಆಧುನಿಕ ಕಲಿಕಾ ತಂತ್ರಗಳನ್ನು- ಕಂಪ್ಯೂಟರ್,ಸೀಡಿ ಇತ್ಯಾದಿಗಳನ್ನು ಬಳಸುವ ಮೂಲಕ ಅವರನ್ನು ಬೌದ್ಧಿಕ ಬಲಿಷ್ಠರನ್ನಾಗಿಸುವ ಪ್ರಯತ್ನ ನಾನಾಮುಖಗಳಿಂದ ನಡೆಯಬೇಕು.

ಅಂತಹ ಪ್ರಯತ್ನಗಳಲ್ಲಿ ಒಂದು ಪುಟ್ಟ ಪ್ರಯತ್ನ ಫ್ರೀಗಣಿತ.ಕಾಂ.

ಸರಳ-ಸುಲಭ-ನೇರ ಮತ್ತು ಉಚಿತ ಕಲಿಕೆಗೆ ಸಹಕಾರಿಯಗಿರುವ ಈ ಅನುಕೂಲವನ್ನು ಈಗಾಗಲೇ ಕಂಪ್ಯೂಟರ್ ಹೊಂದಿರುವ, ಅಥವಾ ಕಂಪ್ಯೂಟರ್ ನ ಎರವಲು ಲಾಭಪಡೆದ ಅಸಂಖ್ಯಾತ ವಿದ್ಯಾರ್ಥಿಗಳು ಈ ಕನ್ನಡದಲ್ಲಿಯ ಉಚಿತ ಗಣಿತ ಅಂತರ್ಜಾಲದ ಮಹತ್ವವನ್ನು ಮನಗಂಡು ತಾವು ಪಡೆದ ಲಾಭವನ್ನು ಮುಕ್ತವಾಗಿ ಹಂಚಿಕೊಂಡಿದ್ದೇ ಇದರ ಯಶಸ್ಸಿನ ಸಂಕೇತ. ಇಂಗ್ಲೀಷ್ ಮಾಧ್ಯಮದಿಂದ ಗಳಿಸುವುದಕ್ಕಿಂತ ಯಾವಮಟ್ಟದಲ್ಲೂ ಕಡಿಮೆಯಿರದ ಇದು ತರಗತಿಯ ಬೋಧನೆಗೆ ಪೂರಕವಾಗಿ ಕಾಣಿಸಿದರೂ ನೇರಕಲಿಕೆಯ ರೀತಿಯದ್ದು ಆಗಿರುವುದೇ ಇದರ ವೈಶಿಷ್ಟ್ಯ.

ವಿಶೇಷತೆಗಳು:

1. ತರಗತಿ 8, 9, 10 ರ ಗಣಿತದ ಪಾಠಗಳು.
2. ಪಾಠಗಳಿಗೆ ಸೂಕ್ತ ಪೀಠಿಕೆ.
3. ಹೇಗೆ ಎನ್ನುವುದಕ್ಕಿಂತ ಏಕೆ, ಯಾವಾಗ ಎನ್ನುವುದರ ಮೇಲೆ ಒತ್ತು.
4. ತಾಳೆ ನೋಡುವ ಕ್ರಮ.
5. ಪ್ರಾಚೀನ ಭಾರತದ ಗಣಿತ ಶಾಸ್ತ್ರಜ್ಞ ಭಾಸ್ಕರನ ‘ಲೀಲಾವತಿ’ ಗ್ರಂಥದಿಂದ ಆಯ್ದ ಲೆಕ್ಕಗಳು.
6. ಗಣಿತದಲ್ಲಿನ ಕನ್ನಡದ ಪಾರಿಭಾಷಿಕ ಪದಗಳಿಗೆ ಸಂವಾದಿಯಾಗಿ ಆಂಗ್ಲಪದಗಳು.
7. ಪರೋಕ್ಷವಾಗಿ ಇಂಗ್ಲೀಷ್ ಕಲಿಯಲೂ ಸಹಕಾರಿ.
8. ನಿತ್ಯ ಜೀವನಕ್ಕೆ ಸಂಬಂಧಿಸಿದ ಪಾಠಗಳಿಗೆ ಒತ್ತು(ಬ್ಯಾಂಕಿಂಗ್, ಲಾಭ-ನಷ್ಟ. .)
9. ಎಲ್ಲಾ ಪಾಠಗಳ ಉಚಿತ ಡೌನ್ ಲೋಡ್.

ಜ್ಞಾನಕ್ಕಾಗಿ ಮಾತ್ರ ಓದುವಿಕೆಯಲ್ಲ; ಅದು ಜೀವನದ ಅವಶ್ಯಕತೆಗಳನ್ನು ಪೂರೈಸುವ ಮಟ್ಟದಲ್ಲಿರಬೇಕೆಂಬ ನೆಲೆಯಲ್ಲಿ ಈ ಜಾಲತಾಣವನ್ನು ನಿರ್ಮಿಸಲಾಗಿದೆ.