PanchaTantra & NitiShataka( Book & Audio CD) : For self development
 
 

Panchatantra!. Who does not know about this monumental work of Vishnu Sharama in the Samskrita Literature?. The print media and visual medias have projected this work as stories for kids through cartoons, though Vishnu Sharma never had that intention in his mind. We forget to note that this master piece of stories was narrated to equip growing up sons of king Amara Shakti, in ruling his kingdom. The messages delivered through 80+ stories help in acquiring new friends, enhancing relationships and conducting/ growing business. Thus, they are beyond boundaries of region/ religion/ time and space. An attempt has been made here to bring out right messages through stories from management and relationship perspective for any age group above 16. Thia is the age group Vishnu Sharma had in mind while writing them then around 3rd Century BC.
Bhartruhari, another Samskrita scholar is known for his famous there Shatakas: Niti Shataka, Shrungara Shataka & Vairagya Shataka. We bring here Shlokas of Niti Shataka along with its meanings.
In the Book and Audio CD(12 hours of MP3):

1. 86 stories.
2. 108 Niti Shataka Shlokas with meanings( In Audio CD, Shlokas are rendered in different Ragas)

To read and listen to few stories Visit: www.facebook.com/5tantra

 

 
     
 
ಬದುಕಿನ ಮಂತ್ರ ಪಂಚತಂತ್ರ ಮತ್ತು ನೀತಿಶತಕ( ಪುಸ್ತಕ ಹಾಗೂ ಆಡಿಯೋ ಸೀಡಿ) : ಬದುಕನ್ನು ರೂಪಿಸುವ 86 ಕಥೆಗಳು
 
  ಪಂಚತಂತ್ರ! ಯಾರು ಕೇಳಿಲ್ಲ ಈ ಹೆಸರನ್ನು? ಇಲ್ಲಿನ ಕತೆಗಳನ್ನು? ದುರಾದೃಷ್ಟವೆಂದರೆ ಇಲ್ಲಿನ ಕತೆಗಳನ್ನು ಮುದ್ರಣ ಮತ್ತು ದೃಶ್ಯಮಾಧ್ಯಮಗಳು ಕೇವಲ ಚಿಕ್ಕಮಕ್ಕಳಿಗಾಗಿಯೇ ಇವೆ ಎಂಬಂತೆ ಕಾರ್ಟೂನ್ ಮೂಲಕ ಬಿಂಬಿಸುತ್ತಾ ಬಂದಿವೆ. ಆದರೆ ವಿಷ್ಣುಶರ್ಮರು ಇಲ್ಲಿನ ಕತೆಗಳನ್ನು ಪ್ರೌಢಾವಸ್ಥೆಯನ್ನು ತಲುಪಿದ್ದ ಮೂರ್ಖರಾಗಿದ್ದ ರಾಜಕುಮಾರರನ್ನು ವ್ಯವಹಾರ ಚತುರರನ್ನಾಗಿಸಲು ಹೇಳಿರುತ್ತಾರೆ. ಆದುದರಿಂದ ಇದು 16 ವರ್ಷವನ್ನು ಮೀರಿದ ಎಲ್ಲಾ ಪ್ರೌಢರಿಗೂ ಅನ್ವಯವಾಗುತ್ತದೆ ಎನ್ನಬಹುದು. ಇಲ್ಲಿನ ಕತೆಗಳು ಮಿತ್ರರನ್ನು ಸಂಪಾದಿಸುವಲ್ಲಿ, ವ್ಯವಹಾರದಲ್ಲಿ ಯಶಸ್ಸುಗಳಿಸುವಲ್ಲಿ, ಅಧಿಕಾರದಲ್ಲಿ ಮುಂದುವರಿಯುವಲ್ಲಿ, ವ್ಯಕ್ತಿತ್ವವನ್ನು ರೂಪಿಸುವಲ್ಲಿ/ವಿಕಸನಗೊಳಿಸುವಲ್ಲಿ ಮುಖ್ಯಪಾತ್ರ ವಹಿಸುತ್ತವೆ. ಇಂತಹ ಹಿನ್ನೆಲೆಯನ್ನು ಗಮನದಲ್ಲಿರಿಸಿ, ಈ ಯೋಜನೆಯಲ್ಲಿ(ಪುಸ್ತಕ ಮತ್ತು ಆಡಿಯೋ ಸಿಡಿ) ಕತೆಗಳನ್ನು ಭಿನ್ನವಾಗಿ ನಿರೂಪಿಸಲಾಗಿದೆ.
ಭರ್ತೃಹರಿಯು ಸಂಸ್ಕೃತದ ಪ್ರಖ್ಯಾತ ಕವಿಯಾಗಿದ್ದು ನೀತಿಶತಕ, ಶೃಂಗಾರ ಶತಕ ಮತ್ತು ವೈರಾಗ್ಯ ಶತಕ ಎನ್ನುವ ತ್ರಿಶಕಗಳನ್ನು ರಚಿಸಿರುವನು. ನೀತಿಶತಕದ ಎಲ್ಲಾ ಶ್ಲೋಕಗಳನ್ನು ಮತ್ತು ಅವುಗಳಿಗೆ ಅರ್ಥವನ್ನು ಈ ಪುಸ್ತಕದಲ್ಲಿ ನೀಡಲಾಗಿದೆ.
ಪುಸ್ತಕ ಮತ್ತು 12 ಗಂ. ಅವಧಿಯ MP3 ಆಡಿಯೋ ಸೀಡಿಯಲ್ಲಿ:
1. 86 ಕತೆಗಳು.
2. ನೀತಿಶತಕದ 108 ಶ್ಲೋಕಗಳು ಅರ್ಥದೊಂದಿಗೆ( ಆಡಿಯೂ ಸೀಡಿಯಲ್ಲಿ ಶ್ಲೋಕಗಳನ್ನು ವಿವಿಧ ರಾಗಗಳಲ್ಲಿ ಹಾಡಲಾಗಿದೆ)
ಕೆಲವು ಕತೆಗಳನ್ನು ಓದಲು ಮತ್ತು ಆಲಿಸಲು: www.facebook.com/5tantra