ಈ ಯೋಜನೆಯ ಯಶಸ್ಸು ಮತ್ತು ಉಪಯುಕ್ತತೆ ಇಲ್ಲಿ ಸಂಗ್ರಹಿಸಿರುವ ಪ್ರಶ್ನೆಗಳ ಸಂಖ್ಯೆ ಮತ್ತು ಅವುಗಳ ವೈವಿಧ್ಯತೆಯನ್ನು ಅವಲಂಬಿಸಿದೆ. ಎಲ್ಲರ ಜೀವನದಲ್ಲೂ ಎಸ್ಎಸ್ಎಲ್ ಸಿ ಪರೀಕ್ಷೆಯು ಒಂದು ಮಹತ್ವ ಘಟ್ಟದ್ದಾಗಿದ್ದು, ಬರೀ ಅಲ್ಲಿನ ಪ್ರಶ್ನೆಗಳನ್ನು ಉತ್ತರಿಸುವುದರ ಮೂಲಕ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಗದೇ ಇರಬಹುದು. ಅತೀ ಕಡಿಮೆ ಎಂದರೆ ತರಗತಿ 8 ಮತ್ತು 9 ರಿಂದಲಾದರೂ ಆರಂಭಿಸಿ, ಪ್ರಶ್ನೆಗಳನ್ನು ಉತ್ತರಿಸುವ ಅಭ್ಯಾಸವನ್ನು ಆರಂಭಿಸಬೇಕಾಗುತ್ತದೆ. ಆದುದರಿಂದ ಈ ಕೋಶದಲ್ಲಿ ತರಗತಿ 10 ರ ಪ್ರಶ್ನೆಗಳ ಜೊತೆಗೆ ತರಗತಿ 8 ಮತ್ತು 9 ರ ಪ್ರಶ್ನೆಗಳನ್ನು ಸೇರಿಸುವುದು ಅತೀ ಮುಖ್ಯವಾಗಿರುತ್ತದೆ. ನೀವು ಈ ತರಗತಿಗಳ(8,9,10) ಪ್ರಶ್ನೆ, ಮತ್ತು ಉತ್ತರಗಳನ್ನು ನಮಗೆ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ದೊರಕಿಸಿಕೊಟ್ಟರೆ ನಿಮ್ಮನ್ನು ಸೂಕ್ತವಾಗಿ ಗೌರವಿಸಲಾಗುವುದು. ಈ ನಿಟ್ಟಿನಲ್ಲಿ ನೀವು ನಮಗೆ ನೀಡಬೇಕಾದ ವಿವರಗಳು ಕೆಳಗಿನಂತಿವೆ:

1) ಪ್ರಶ್ನೆ ಪತ್ರಿಕೆಯ ವಿಷಯಗಳು: ಕನ್ನಡ ಪ್ರಥಮ ಭಾಷೆ, ಇಂಗ್ಲೀಷ್ ದ್ವಿತೀಯ ಭಾಷೆ, ಗಣಿತ, ವಿಜ್ಞಾನ(ಭೌತ, ರಸಾಯನ, ಜೀವ ಶಾಸ್ತ್ರ) ಮತ್ತು ಸಮಾಜ ವಿಜ್ಞಾನ.
2) ಭಾಷೆಗಳನ್ನು ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಕನ್ನಡ ಮತ್ತು ಅದಕ್ಕೆ ಸಮನಾದ ಇಂಗ್ಲೀಷ್ ನಲ್ಲಿ ಪ್ರಶ್ನೆ ಮತ್ತು ಉತ್ತರಗಳು.

ಇಮೈಲ್ ಕಳಿಸಬೇಕಾದ ವಿಳಾಸ : qkosha@eshale.org

ಗಮನಿಸಿ: ಕನ್ನಡದಲ್ಲಿನ ಪ್ರಶ್ನೆ ಮತ್ತು ಉತ್ತರಗಳನ್ನು ಯುನಿಕೋಡ್ ನಲ್ಲಿ ಟೈಪಿಸಿರಬೇಕು. ಟೈಪಿಸಿದ ಫೈಲ್ ಗಳು .doc ಅಥವಾ .ods ರೂಪದಲ್ಲಿ ಇರಬೇಕು.

 

__________________________________
:: © eShale.org :: ನಿಬಂಧನೆಗಳು :: ಹಕ್ಕು ಸ್ವಾಮ್ಯ :: ಅನಿಸಿಕೆಗಳು :: ಸ್ನೇಹಿತರಿಗೆ ತಿಳಿಸಿ ::